ಮಹಾಕುಂಭ ಮೇಳ : ಅನೀಲ್ ಕುಂಬ್ಳೆ ಪುಣ್ಯ ಸ್ನಾನ
Posted in :
ಮಹಾಕುಂಭ ಮೇಳ : ಮಂಗಳವಾರ ಖ್ಯಾತ ಕ್ರಿಕೇಟರ್ ಅನೀಲ ಕುಂಬ್ಳೆ ಅವರು ಸಾಮಾನ್ಯ ಭಕ್ತರಂತೆ ಸಂಗಮದವರೆಗೂ ದೋಣಿಯಲ್ಲಿ ಸಾಗಿ ಪತ್ನಿ ಚೈತನ ರಾಮತೀರ್ಥ ಅವರೊಂದಿಗೆ ಪುಣ್ಯ ಸ್ನಾನ ಮಾಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತೀರುವ ಮಹಾಕುಂಭ ಮೇಳದಲ್ಲಿ ಬುಧುವಾರ ಸಂಜೆ ವೇಳೆವರೆಗೆ ಸುಮಾರು 2 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಮಹಾಕುಂಭ ಮೇಳ ಆರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 46 ಕೋಟಿ ಜನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಅಂತಾ ಉತ್ತರ ಪ್ರದೇಶದ ಸರಕಾರ ಮಾಹಿತಿ ನೀಡಿದೆ. ಎಲ್ಲ ಕಡೆಯಲ್ಲಿ ಪೋಲಿಸರನ್ನು ನಿಯೋಜಿಸುವ ಮೂಲಕ ಜನದಟ್ಟನೆ ನಿಯಂತ್ರಿಸಲಾಗುತ್ತಿದ್ದು, ಫ್ರೆ-26 ಮಹಾಶಿವರಾತ್ರಿ ದಿನದಂದು ಮಹಾಕುಂಭ ಮೇಳ ಮುಕ್ತಾಯವಾಗಲಿದೆ.



