ಅಶ್ಲೀಲ್ ಹೇಳಿಕೆ : ಯ್ಯುಟೂಬರ್ ರಣವೀರ ಅಲಹಾಬಾದಿಯಾ ಕ್ಷಮೆಯಾಚನೆ
Posted in :
ಖ್ಯಾತ ಯ್ಯುಟೂಬರ್ ರಣವೀರ ಅಲಹಾಬಾದಿಯಾ ಅವರು ಹಾಸ್ಯ ನಟ ಸಮಯ ರೈನಾ ಅವರ ಶೋ “ಇಂಡಿಯಾಸ್ ಗಾಟ್ ಲ್ಯಾಟೆಂಟ”ನಲ್ಲಿ ನಿಮ್ಮ ಪೋಷಕರು ಲೈಂಗಿಕವಾಗಿರುವುದನ್ನು ನೀವು ನೋಡುತ್ತೀರಾ ಎಂಬ ಅಶ್ಲೀಲ ಪ್ರಶ್ನೆಗೆ ಕಾನೂನು ಹಾಗೂ ಸಾರ್ವಜನಿಕ ಹಿನ್ನಡೆ ಎದುರುಸುತ್ತಿದ್ದಾರೆ.ಅಶ್ಲೀಲ್ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದಂತೆ ಮಹಾರಾಷ್ಟ್ರ ಸೈಬರ್ ಪೋಲಿಸ “ಇಂಡಿಯಾಸ್ ಗಾಟ್ ಲ್ಯಾಟೆಂಟ” ಶೋದ ವಿರುದ್ದ ಪ್ರಕರಣ ದಾಖಲಿಸಿದೆ. ನಂತರ ಕಾರ್ಯಕ್ರಮದ ಎಲ್ಲ ಸಂಚಿಕೆಗಳನ್ನು ತೆಗೆದು ಹಾಕಲು ಸೂಚಿಸಿದೆ. ಜೊತೆಗೆ ಹಾಸ್ಯ ನಟ ಸಮಯ ರೈನಾ ಸೇರಿದಂತೆ ಹಲವರ ಮೇಲೆ ಎಫ್ ಐ ಆರ್ ದಾಖಲಿಸಿದೆ.ಕೋಲಾಹಲದ ನಂತರ ರಣವೀರ ಅಲಹಾಬಾದಿಯಾ ಅವರು ಸೋಶೆಲ್ ಮೀಡಿಯಾದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.



