Tesla CEO Elon Musk : ಪ್ರಧಾನಿ ಮೋದಿ ಅವರ ಜೊತೆ ಚರ್ಚೆ.
Posted in :

ಬುಧವಾರ ಆರಂಭವಾದ ಎರಡು ದಿನಗಳ ಅಮೇರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುವ ಕೆಲ ಗಂಟೆಗಳ ಮೊದಲು ಅಮೇರಿಕದ ಬಿಲಿಯನೇರ್ ಎಲೋನ್ ಮಸ್ಕ್ ಅವರನ್ನು ಗುರುವಾರ ವಾಷಿಂಗ್ಟನ್ ಡಿ.ಸಿ ಯಲ್ಲಿ ಭೇಟಿಯಾದರು.
ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಸರ್ಕಾರದ ದಕ್ಷತೆಯ ವಿಭಾಗದ (DOGE) ಮುಖ್ಯಸ್ಥರಾಗಿರುವ ಎಲೋನ್ ಮಸ್ಕ್ ಅವರು ಬ್ಲೇರ್ ಹೌಸ್‌ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದರು. ಎಲೋನ್ ಮಸ್ಕ್ ಅವರು ಪ್ರಧಾನಿ ಮೋದಿ ಅವರಿಗೆ ಸ್ಟಾರ್‌ಶಿಪ್ ಹೀಟ್‌ಶೀಲ್ಡ್ ಟೈಲ್ ಅನ್ನು ಉಡುಗೊರೆಯಾಗಿ ನೀಡಿದರು.
” ಪ್ರಧಾನಿ ಮೋದಿ ಅವರು ಬಾಹ್ಯಾಕಾಶ, ತಂತ್ರಜ್ಞಾನ ಮತ್ತು ಉತ್ತಮ ಆಡಳಿತ ಕುರಿತು ಮಾತನಾಡಿದ್ದಾರೆ ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಲೋನ್ ಮಸ್ಕ್ ಅವರು ಟ್ರಂಪ್ ಅವರ ಮಿತ್ರ ಮತ್ತು SpaceX, Tesla ಮಾಲೀಕರು ಇವೆರಡೂ ಭಾರತದಲ್ಲಿ ಭಾರಿ ವ್ಯಾಪಾರ ಹಿತಾಸಕ್ತಿಗಳನ್ನು ಹೊಂದಿವೆ ಈಗ ಅಮೇರಿಕದ ಸರ್ಕಾರದ ದಕ್ಷತೆಯ ಇಲಾಖೆಯ (DOGE) ಮುಖ್ಯಸ್ಥರಾಗಿದ್ದಾರೆ.


