Plane Crash : ಲ್ಯಾಂಡಿಗ್ ವೇಳೆ ತೆಲೆಕೆಳಗಾಗಿ ಪಲ್ಟಿಯಾದ ಡೆಲ್ಟಾ ವಿಮಾನ.
Posted in :
ಡೆಲ್ಟಾ ಏರಲೈನ್ಸ್ ವಿಮಾನವು ಸೋಮವಾರ ಟೊರೊಂಟೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿದ್ದು ಅಂತಿಮವಾಗಿ ರನ್ವೇಯಲ್ಲಿ ತೆಲೆಕೆಳಗಾಗಿ ನಿಂತಿದೆ.

ಡೆಲ್ಟಾ ಏರ್ಲೈನ್ಸ್ ವಿಮಾನ ಅಪಘಾತ : 76 ಪ್ರಯಾಣಿಕರು ಮತ್ತು 4 ಸಿಬ್ಬಂದಿಯನ್ನು ಹೊಂದಿದ್ದ ಡೆಲ್ಟಾ ಏರ್ಲೈನ್ಸ್ 4819 ವಿಮಾನವು ಸೋಮವಾರ ಫ್ರೇಬ್ರುವರಿ 17, 2025 ರಂದು ಕೆನಡಾದ ಟೊರೊಂಟೊ ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿ ಪಲ್ಟಿಯಾಗಿದ್ದು ಸುಮಾರು 18 ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೊರೊಂಟೊದಲ್ಲಿ ಲ್ಯಾಂಡ್ ಆಗುತ್ತಿರುವಾಗ ಭಾರಿ ಹಿಮಪಾತದ ನಂತರ ಈ ಘಟನೆ ನಡೆದಿದೆ.
ಒಂದು ಮಗು ಸೇರಿದಂತೆ ಎಲ್ಲಾ ಗಾಯಗೊಂಡ ಪ್ರಯಾಣಿಕರನ್ನು ಆಂಬ್ಯುಲೆನ್ಸ್ ಮತ್ತು ಹೆಲಿಕಾಪ್ಟರ್ ಮೂಲಕ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತುರ್ತು ಸಿಬ್ಬಂದಿಗಳು ಕೆಲವೇ ನಿಮಿಷಗಳಲ್ಲಿ ಸ್ಥಳವನ್ನು ತಲುಪುವ ಮೂಲಕ ಮತ್ತು ಪ್ರಯಾಣಿಕರನ್ನು ತ್ವರಿತವಾಗಿ ಸ್ಥಳಾಂತರಿಸುವ ಮೂಲಕ, ಕೆಲವು ಪ್ರಯಾಣಿಕರು ಈಗಾಗಲೇ ತಮ್ಮ ಸ್ನೇಹಿತರು ಮತ್ತು ಅವರ ಕುಟುಂಬಗಳೊಂದಿಗೆ ಮತ್ತೆ ಸೇರಿದ್ದಾರೆ. ಎಂದು ಟೊರೊಂಟೊ ವಿಮಾನ ನಿಲ್ದಾಣದ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಡೆಬೊರಾ ಫ್ಲಿಂಟ್ ಹೇಳಿದ್ದಾರೆ.


