U.S. app Store : ಟಿಕ್ ಟಾಕ್ U.S. app Store ನಲ್ಲಿ ಮತ್ತೆ ಬಂದಿದೆ,
Posted in :
ಗುರುವಾರ ಸಂಜೆ ಯು.ಎಸ್. ನಲ್ಲಿ Apple ಮತ್ತು Google ಕಂಪನಿಗಳು ತಮ್ಮ app ಸ್ಟೋರಗಳಿಗೆ ಟಿಕ್ ಟಾಕ್ (Tik Tok) ನ್ನು ಮರುಸ್ಥಾಪಿಸಿವೆ. ಕಂಪನಿಗಳು ಟಿಕ್ ಟಾಕ್ ಮೂಲ ಕಂಪನಿಯಾದ ಬೈಟ್ ಡ್ಯಾನ್ಸ್, ವಿಡಿಯೋ ಎಡಿಟರ್ ಕ್ಯಾಪ್‌ಕಟ್ ಮತ್ತು ಕಾನೂನಿಗೆ ಅನುಸಾರವಾಗಿ ತೆಗೆದುಹಾಕಿರುವ ಸಾಮಾಜಿಕ ಮಾದ್ಯಮ ಅಪ್ಲಿಕೇಶನ್ ಲೆಮನ್8 ಒಡೆತನದ ಇತರ ಅಪ್ಲಿಕೇಶನ್‌ಗಳನ್ನು ಸಹ ಮರುಸ್ಥಾಪಿಸಿವೆ.
ಮಾಜಿ ಯು.ಎಸ್ ಅಧ್ಯಕ್ಷ ಜೋ ಬಿಡೆನ್ ಕಳೆದ ವರ್ಷ ಬೈಟ್‌ಡ್ಯಾನ್ಸಗೆ ಟಿಕ್ ಟಾಕ್‌ನ ಯು.ಎಸ್. ಕಾರ್ಯಾಚರಣೆಗಳನ್ನು ಜನವರಿ 19, 2025 ರೊಳಗೆ ಚೀನಾದ ಘಟಕದ ಮಾಲೀಕತ್ವದಲ್ಲಿಲ್ಲದ ಕಂಪನಿಗೆ ಮಾರಾಟ ಮಾಡಲು ಅಥವಾ ದೇಶದಿಂದ ನಿಷೇಧಿಸುವಂತೆ ಕಾನೂನನ್ನು ಅಂಗೀಕರಿಸಿದ್ದರು.
ಆದರೆ ಪ್ರಸ್ತುತ ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯು.ಎಸ್. ನಲ್ಲಿ ಟಿಕ್ ಟಾಕ್ ಸೇವೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಮಾಜಿ ಅಧ್ಯಕ್ಷ ಜೋ ಬಿಡೆನ್ ಅವರ ಅವಧಿಯಲ್ಲಿ ಉಭಯಪಕ್ಷೀಯ ಕಾಂಗ್ರೆಸ್ ಬೆಂಬಲದೊಂದಿಗೆ ಅಂಗೀಕರಿಸಿದ PAFACA ಅನ್ನು ಎತ್ತಿಹಿಡಿಯುವ ಯು.ಎಸ್. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನೆರಳಿನಲ್ಲೇ ಟ್ರಂಪ್ ಅವರ ಈ ಕ್ರಮವು ಬಂದಿದೆ.



