ದೆಹಲಿ ವಿಧಾನಸಭೆ ಚುನಾವಣೆ 2025 : ಬಿ.ಜೆ.ಪಿ ಭರ್ಜರಿ ಗೆಲುವು

ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಶನಿವಾರ ದಿನಾಂಕ 08 ರಂದು ಹೊರಬಿದಿದ್ದು  ಭಾರತಿಯ ಜನತಾ ಪಾರ್ಟಿ (ಬಿ ಜೆ ಪಿ) ಭರ್ಜರಿ ಗೆಲುವು ಸಾಧಿಸುವ ಮೂಲಕ ಆಮ್‌ ಆದ್ಮಿ ಪಾರ್ಟಿಯ ಆಡಳಿತ ಕೊನೆಗೊಂಡಿದೆ. ಬೆಳಿಗ್ಗೆ 7-00 ಗಂಟೆಯಿಂದಲೆ ಮತ ಏಣಿಕೆ ಪ್ರಾರಂಭವಾಗಿದ್ದು, ಎಎಪಿ ಹಾಗೂ ಬಿಜೆಪಿ ಮಧ್ಯೆ ಪ್ರಬಲ ಪೈಪೋಟಿ ಆಗಿ 27 ವರ್ಷಗಳ ನಂತರ   ದೆಹಲಿಯಲ್ಲಿ  ಬೆಜೆಪಿ ಅಧಿಕಾರಕ್ಕೆ ಬಂದಿದೆ.

ದೆಹಲಿ ಚುನಾವಣೆ ಫಲಿತಾಂಶ ಕುರಿತು ಪ್ರಧಾನಿ ಮೋದಿ ಅವರು ದೆಹಲಿ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವಿಟ ಮಾಡಿರುವ ಅವರು “ಜನಶಕ್ತಿಯೇ ಸರ್ವೋಚ್ಚ” ಅಂತಾ ಹೇಳಿದ್ದಾರೆ